Dr. Dhananjaya Sarji

ಜನಪರ - ಜೀವಪರ

Health Camp

ಶಿವಮೊಗ್ಗ ವಿದ್ಯಾನಗರ ಇಸ್ಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಜಿ ಫೌಂಡೇಶನ್ ಶಿವಮೊಗ್ಗ ಹಾಗೂ ಸರ್ಜಿ ಆಸ್ಪತ್ರೆಗಳ ಸಮೂಹ ಮತ್ತು ವಿದ್ಯಾನಗರ ಸ್ಟಾರ್ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಸರ್ಜಿ ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಮಕ್ಕಳಿಗೆ ಉಚಿತ ಟೈಫಾಯ್ಡ್ ಲಸಿಕೆ ನೀಡಿದರು. ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್ ವಿತರಣೆ ಮಾಡಲಾಯಿತು. ಸರ್ಜಿ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು , ವಿದ್ಯಾನಗರ ಸ್ಟಾರ್ ಗೆಳೆಯರ ಬಳಗದ ಕೃಷ್ಣಕುಮಾರ್ , ಮಂಜು, ಕಾರ್ತಿಕ್ , ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್, ಸಿ ಆರ್ ಪಿ ಶ್ರೀಮತಿ ವಿಲ್ಮಾ ಹಾಜರಿದ್ದರು.