Dr. Dhananjaya Sarji

ಜನಪರ - ಜೀವಪರ

Paropakaram

ಮುಂಜಾನೆಯ ಸೂರ್ಯ ಆಗತಾನೆ ಕಣ್ಣು ಬಿಡುತ್ತಿದ್ದ. ಒಂದೆಡೆ ಇಬ್ಬನಿ, ಇನ್ನೊಂದೆಡೆ ಚಳಿ. ಇದ್ಯಾವುದನ್ನೂ ಲೆಕ್ಕಿಸದೇ ಹತ್ತಾರು ಜನರ ತಂಡವೊಂದು ನಗರದ ಮಧ್ಯ ಭಾಗದ ರೋಟರಿ ಬ್ಲಡ್‌ ಬ್ಯಾಂಕ್‌ಗೆ ಹೊಂದಿಕೊಂಡಿರುವ ಉದ್ಯಾನವನವನ್ನು ಸ್ವಚ್ಛಗೊಳಿಸುವ ಮೂಲಕ ಹೊಸ ರೂಪವನ್ನು ನೀಡಿತು. ಹೌದು, ಸರ್ಜಿ ಫೌಂಡೇಶನ್‌ ಹಾಗೂ ಶಿವಮೊಗ್ಗ ಪರೋಪಕಾರಂನ ಸದಸ್ಯರು ಬೆಳ್ಳಂಬೆಳಗ್ಗೆಯೇ ಕೈಯಲ್ಲಿ ಗುದ್ದಲಿ, ಕೈ ಬಾಚಿ, ಕುಡುಗೋಲು, ಸಲಿಕೆಗಳನ್ನು ಹಿಡಿದು ಆಳ್ತತೆರಕ್ಕೆ ಬೆಳೆದಿದ್ದ ಗಿಡ, ಗಂಟೆಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು. ಹಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದೇ ಕಾಡಿನಂತಾಗಿ, ಹಾವು, ಹೆಗ್ಗಣ, ಇಲಿ ಹಾಗೂ ಹಂದಿಗಳ ಆವಾಸಸ್ಥಾನವಾಗಿದ್ದ ಪಾರ್ಕ್‌ನ್ನು ಶ್ರಮಾಧಾನದ ಮೂಲಕ ಸ್ವಚ್ಛಗೊಳಿಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ. ಧನಂಜಯ ಸರ್ಜಿ ಮತ್ತು ಶಿವಮೊಗ್ಗ ಪರೋಪಕಾರಂನ ಸದಸ್ಯರಾದ ಪರೋಪಕಾರಂ ಶ್ರೀಧರ್‌, ಶ್ರೀಕಾಂತ್‌ ಹೊಳ್ಳ, ತ್ಯಾಗರಾಜ್‌ ಮಿತ್ಯಾಂತ, ನಾಗೇಂದ್ರ ಶಿರೋಳ್ಕರ್‌, ಅನಿಲ್‌ ಹೆಗಡೆ, ಓಂಪ್ರಕಾಶ್‌, ಕಿರಣ್‌ ತೇಲ್ಕರ್‌, ಶಿವಕುಮಾರ್‌ ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಪಾಲೊಂಡಿದ್ದರು.