Dr. Dhananjaya Sarji
ಜನಪರ - ಜೀವಪರ
Health camp Hosanagara
ಹೊಸನಗರದ ಸಂತ ಆಂತೋನಿಯವರ ದೇವಾಲಯದಲ್ಲಿ ಗುರುವಾರ ಸರ್ಜಿ ಫೌಂಡೇಶನ್ ಶಿವಮೊಗ್ಗ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸರ್ಜಿ ಆಸ್ಪತ್ರೆಗಳ ಸಮೂಹದ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮಕ್ಕಳ ತಜ್ಞರಾದ ಡಾ. ಧನಂಜಯ ಸರ್ಜಿ, ಪಿಜಿಷಿಯನ್ ಡಾ. ಶೂನ್ಯ ಸಂಪದ್ ಹಾಗೂ ಮೂಳೆ ರೋಗ ತಜ್ಞರು, ಸ್ತ್ರೀರೋಗ ತಜ್ಞರು, ಆಸ್ಪತ್ರೆಯ ಸಿಬ್ಬಂದಿ, ದಾದಿಯರು ಭಾಗವಹಿಸಿದ್ದರು, ಸಕ್ಕರೆ ಕಾಯಿಲೆ, ರಕ್ತದೊತ್ತಡ ಪರೀಕ್ಷೆ ನಡೆಸಿ ಉಚಿತವಾಗಿ ಔಷಧಿ ವಿತರಿಸಲಾಯಿತು.