Dr. Dhananjaya Sarji

ಜನಪರ - ಜೀವಪರ

E-waste

ಶಿವಮೊಗ್ಗ ನಗರದ ವಿವಿಧ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಇ -ತ್ಯಾಜ್ಯ ಅರಿವು ಮತ್ತು ವಿಲೇವಾರಿ ಅಭಿಯಾನಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ಆರ್‌. ಅವರು ಆಚಾರ್ಯ ತುಳಸಿ ಕಾಲೇಜಿನ, ಚಂದನ ಸಭಾಂಗಣದಲ್ಲಿ ಚಾಲನೆ ನೀಡಿದರು. ಸರ್ಜಿ ಫೌಂಡೇಶನ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಡೂ ಮೈಂಡ್ಸ್ ಡಿಸೈನ್‌ ಲ್ಯಾಬ್‌ ಶಿವಮೊಗ್ಗ, ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿವಮೊಗ್ಗ ರೇಡಿಯೋ ,ನಡಿಗೆ ಶಿಕ್ಷಣ ಪ್ರತಿಷ್ಠಾನ ಸಂಯುಕ್ತಾಶ್ರಯ ಹಾಗೂ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸರ್ಜಿ ಫೌಂಡೇಷನ್‌ ಶಿವಮೊಗ್ಗ, ಐ-ಸೆವೆನ್‌ ಬೆಂಗಳೂರು, ರೇಡಿಯೋ ಶಿವಮೊಗ್ಗ ಎಫ್‌.ಎಂ. 90.8, ಶಿವಮೊಗ್ಗ ಐಟಿ ಅಸೋಸಿಯೇಷನ್‌, ರಾಷ್ಟ್ರೀಯ ಶಿಕ್ಷಣ ಸಮಿತಿ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿ ಸಹಕಾರ ನೀಡಿದ್ದು, ಅಭಿಯಾನ 15 ದಿನಗಳ ಕಾಲ ನಡೆಯಲಿದೆ.